ಕನ್ನಡ ಭಾಷೆ, ನಾಡು–ನುಡಿ ಹಾಗೂ ಕನ್ನಡಿಗರ ಹಿತ ರಕ್ಷಣೆಗೆ ಬದ್ಧವಾಗಿರುವ ಕಿತ್ತೂರು ಕರ್ನಾಟಕ ಸೇನೆ.
Apply For Membership
ಕಿತ್ತೂರು ಕರ್ನಾಟಕ ಸೇನೆ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು
ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸ್ಥಾಪಿತವಾದ ಸಂಘಟನೆಯಾಗಿದೆ.
ಕನ್ನಡಿಗರ ಮೇಲೆ ನಡೆಯುವ ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯ ಮತ್ತು
ಭಾಷಾ ಅಪಮಾನಗಳ ವಿರುದ್ಧ ನ್ಯಾಯಯುತ ಹೋರಾಟ ನಡೆಸುವುದು ನಮ್ಮ ಮೂಲ ಧ್ಯೇಯವಾಗಿದೆ.
ಸ್ಥಾಪನೆಯ ದಿನಾಂಕ: 25/10/2024
ಕಾನೂನು ಹೆಸರು (Legal Name): Kittur Karnataka Sene
DBA ಹೆಸರು: Kittur Karnataka Sene
ಕನ್ನಡ ಭಾಷೆಗೆ ಅಥವಾ ನಾಡಿನ ಸಂಸ್ಕೃತಿಗೆ ಧಕ್ಕೆ ಬಂದಾಗ, ಯಾವುದೇ ಮುಲಾಜಿಗೆ ಒಳಗಾಗದೆ ತಕ್ಷಣವೇ ಹೋರಾಟಕ್ಕೆ ಇಳಿಯುವ ದೃಢ ನಿಲುವನ್ನು ಕಿತ್ತೂರು ಕರ್ನಾಟಕ ಸೇನೆ ಹೊಂದಿದೆ. ನಾಡಿನ ನೆಲ–ಜಲ, ಸಂಸ್ಕೃತಿ ಮತ್ತು ಜನಜೀವನದ ರಕ್ಷಣೆಗೆ ಸದಾ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
ಕಿತ್ತೂರು ಕರ್ನಾಟಕ ಸೇನೆಯು ರಾಜ್ಯಾಧ್ಯಕ್ಷರಾದ ಶ್ರೀ ಮಹಾದೇವ ತಳವಾರ ಅವರ ಸಮರ್ಥ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಕನ್ನಡದ ಕಟ್ಟಾಳುಗಳ ಬಲಿಷ್ಠ ಪಡೆಯಿಂದ ಸಂಘಟನೆಗೆ ಶಕ್ತಿ ದೊರೆಯುತ್ತಿದೆ.
“ದೇಶದ ಗಡಿ ಭದ್ರವಾಗಿದ್ದರೆ ದೇಶ ಭದ್ರ; ನಾಡಿನ ಗಡಿ ಭದ್ರವಾಗಿದ್ದರೆ ನಾಡು–ನುಡಿ ಭದ್ರ” ಎಂಬ ಘೋಷಣೆಯನ್ನು ಎದೆಗೇರಿಸಿಕೊಂಡು, ನಾವು ಕನ್ನಡದ ಅಸ್ಮಿತೆಯ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
ಸಮಾಜದಲ್ಲಿ ಕನ್ನಡಿಗರ ಗೌರವ, ಹಕ್ಕು ಮತ್ತು ಸ್ವಾಭಿಮಾನವನ್ನು ಕಾಪಾಡುವ ಉದ್ದೇಶದಿಂದ ಕಿತ್ತೂರು ಕರ್ನಾಟಕ ಸೇನೆ ನಿರಂತರವಾಗಿ ಹೋರಾಟ, ಜಾಗೃತಿ ಮತ್ತು ಸಂಘಟನೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.