About

Learn More About Us

🛡️ ನಮ್ಮ ಮೂಲ ಧ್ಯೇಯಗಳು

  • ಕನ್ನಡಿಗರ ರಕ್ಷಣೆ: ಕನ್ನಡಿಗರ ಮೇಲೆ ನಡೆಯುವ ಯಾವುದೇ ರೀತಿಯ ಅನ್ಯಾಯ ಮತ್ತು ದೌರ್ಜನ್ಯಗಳನ್ನು ತಡೆಯುವುದು.
  • ಭಾಷಾ ರಕ್ಷಣೆ: ಕನ್ನಡ ಭಾಷೆಗೆ ಧಕ್ಕೆ ಬಂದಾಗ, ಯಾವುದೇ ಮುಲಾಜಿಗೆ ಒಳಗಾಗದೆ, ತಕ್ಷಣವೇ ನ್ಯಾಯಯುತ ಹೋರಾಟ ನಡೆಸುವುದು.
  • ಸಮಗ್ರ ರಕ್ಷಣೆ: ನಾಡಿನ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಜನ ಜೀವನಕ್ಕೆ ಯಾವುದೇ ರೀತಿಯ ಧಕ್ಕೆ ಬಂದಾಗ ಅದನ್ನು ವಿರೋಧಿಸುತ್ತ, ನ್ಯಾಯಕ್ಕಾಗಿ ಸದಾ ಹೋರಾಡುವುದು.

ಕಿತ್ತೂರು ಕರ್ನಾಟಕ ಸೇನೆಯು ರಾಜ್ಯಾಧ್ಯಕ್ಷರಾದ ಶ್ರೀ ಮಹಾದೇವ ತಳವಾರ ಅವರ ಸಮರ್ಥ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ. ಇವರಿಗೆ ಕನ್ನಡದ ಕಟ್ಟಾಳುಗಳ ಅಗಾಧ ಪಡೆಯೇ ಬಲವಾಗಿದೆ. ಈ ಪಡೆ ಕನ್ನಡದ ಏಳಿಗೆಗಾಗಿ ಮತ್ತು ನೆಲ-ಜಲದ ರಕ್ಷಣೆಗಾಗಿ ಕಂಕಣಬದ್ಧರಾಗಿ ನಿಂತಿದೆ.

"ದೇಶದ ಗಡಿ ಭದ್ರವಾಗಿದ್ದರೆ ದೇಶ ಭದ್ರ; ನಾಡ ಗಡಿ ಭದ್ರವಾಗಿದ್ದರೆ ನಾಡು-ನುಡಿ ಭದ್ರ" ಎಂಬ ಘೋಷಣೆಯನ್ನು ಎದೆಗೇರಿಸಿಕೊಂಡು, ನಾವು ಕನ್ನಡದ ಅಸ್ಮಿತೆಯ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.